Notifications
-
ದಿನಾಂಕ 19.09.2011ರಂದು ಸಿ.ಡಿ.ಎಸ್ ಪುನರ್ರಚನೆ ಮಾಡಲಾಯಿತು. ಅಧ್ಯಕ್ಷರಾಗಿ ಶ್ರೀಮತಿ ಭಾರತಿ.ಎಮ್.ಹುಲ್ಲೂರ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ನೀಲಕ್ಕ ಎಮ್ ಬೊಮ್ಮಸಾಗರ ಆಯ್ಕೆಯಾದರು.
-
ದಿನಾಂಕ 12.10.2011ರಂದು ಗಾಂಧೀ ಸಮಾರಕ ಭವನದಲ್ಲಿ ಘನತ್ಯಾಜ್ಯ ವಸ್ತು ನಿರ್ವಹಣೆ ಕುರಿತು ಪ್ರಾಥಮಿಕ ಹಂತದಲ್ಲಿ ಜನ ಸಾಮಾನ್ಯರಿಗೆ ತಿಳುವಳಿಕೆ ನೀಡುವ ಕುರಿತು ಅನುಸರಿಸಬೇಕಾದ ಕಾರ್ಯಗಳ ಬಗ್ಗೆ ಮತ್ತು ಮನೆ ಮನೆಯಿಂದ ಕಸ ಸಂಗ್ರಹ ಮಾಡುವ ಕುರಿತು ಸಾರ್ವಜನಿಕ ತಿಳುವಳಿಕೆ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಚರ್ಚಿಸಲು ಪಟ್ಟಣ ಪ್ರದೇಶದಲ್ಲಿ ಸಮುದಾಯ ಅಭಿವೃದ್ದಿ ಸಂಘದ ಸದಸ್ಯರನ್ನು ಒಳಗೊಂಡ ಪುರಸಭೆಯ ಮುಖ್ಯಾಧಿಕಾರಿಗಳ ನೇತೃತ್ವದಲ್ಲಿ ಸಭೆ ಜರುಗಿಸಲಾಯಿತು. ಸಭೆಯಲ್ಲಿ 125ಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಸದಸ್ಯರು ಉಪಸ್ಥಿತರಿದ್ದರು. ಮನೆ ಮನೆಯಿಂದ ಕಸವನ್ನು ಸಂಗ್ರಹಿಸಿ, ಸಾಗಣೆ ಮಾಡುವ ಕುರಿತು ವಿವರವಾದ ಚರ್ಚೆ ನಡೆಯಿತು. ಕಸ ವಿಲೇವಾರಿಯನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಕುರಿತು ಅಗತ್ಯವಾದ ಸಹಾಯ ಸಹಕಾರ ನೀಡಲು ಮತ್ತು ಗಲ್ಲಿ-ಗಲ್ಲಿಯಲ್ಲಿ ತಿಳುವಳಿಕೆ ಕಾರ್ಯಕ್ರಮ ನಡೆಸಿಕೊಟ್ಟು ಯಶಸ್ವಿಗೊಳಿಸಲಿಕ್ಕೆ ಸಹಕರಿಸುವದಾಗಿ ಉಪಸ್ಥಿತರಿದ್ದ ಎಲ್ಲಾ ಮಹಿಳಾ ಸದಸ್ಯರು ಒಕ್ಕೊರರಿಂದ ಘೋಷಿಸಿದರು. ಸಭೆ ಯಶಸ್ವಿಯಾಗಿ ನಡೆದು ಮುಕ್ತಾಯಗೊಂಡಿತು.

