Home

 

 


ಗುಳೇದಗುಡ್ಡ ಪುರಸಭೆಯು ಕ್ರಿ.ಶ 1888ರಲ್ಲಿ  ಸ್ಥಾಪನೆಯಾಯಿತು.

ಒಟ್ಟು ಕ್ಷೇತ್ರ 4.84ಚ.ಕಿ.ಮಿ

2001ರ ಜನಗಣತಿ ಪ್ರಕಾರ ಒಟ್ಟು ಜನಸಂಖ್ಯೆ 33991

        ಗುಳೇದಗುಡ್ಡ ಹುಟ್ಟಿದ್ದು ಪಟ್ಟಣವಾಗಿಯೇ. ಕ್ರಿ.ಶ 1580ರಲ್ಲಿ ಬಿಜಾಪೂರದ ಎರಡನೇ ಇಬ್ರಾಹಿಂ ಆದಿಲಶಾಹನ ಕಾಲಕ್ಕೆ ಇಲ್ಲಿ ಒಂದು ಕೋಟೆಯನ್ನು ಕಟ್ಟಲಾಯಿತು, ತದನಂತರದಲ್ಲಿ ಕ್ರಿ.ಶ 1706ರಲ್ಲಿ ಜಲಾಶಯದ ದಂಡೆಯ ಮೇಲೆ ಸುಂದರವಾದ ಈ ಪಟ್ಟಣವನ್ನು ಮೂಲ ಪುರಷರು.

     ಕೆಲವು ಶತಮಾನಗಳ ಪೂರ್ವದಲ್ಲಿ ಗುಡ್ಡದ ಮೇಲೆ ನೆಲೆಗೊಂಡ ಈ ಗೂಳಿಗುಡ್ಡವು ಗುಡ್ಡದ ಕೆಳಗೆ ಬಂದು ಸ್ಥಾಪನೆಗೊಂಡು ಗುಳೇದಗುಡ್ಡವಾಯಿತು. ಗುಡ್ಡದ ಮೇಲೆ ಊರು ನೆಲೆಗೊಂಡಾಗ ಕೋಟಿಕಲ್ ಮಠದ ಗೂಳಿಯೊಂದು ಈ ಗುಡ್ಡದಲ್ಲಿ ತಿರುಗಾಡುತ್ತಿತ್ತೆಂದೂ ಅದಕ್ಕಾಗಿ ಈ ಊರಿಗೆ ಗೂಳಿಗುಡ್ಡವೆಂಬ ಹೆಸರು ಬಂದಿತೆಂಬ ಪ್ರತೀತಿ ಇದೆ. ಕ್ರಿ.ಶ 1705ರಲ್ಲಿ ಗುಡ್ಡದ ಮೇಲಿನ ಈ ಗೂಳಿಗುಡ್ಡವು ಗುಡ್ಡದ ಮೇಲಿನಿಂದ ಕೆಳಗೆ ಬಂದು ಸ್ಥಾಪನೆಗೊಂಡಿತು. ಈಗ ಊರಿದ್ದ ಸ್ಥಳದಲ್ಲಿ ಕೆರೆ ಇದ್ದುದರಿಂದ ಒಂದು ಕಾಲಕ್ಕೆ ಕೆರೆ ಒಡೆದು ನೀರೆಲ್ಲವೂ ಬಸಿದು ಹೋದದ್ದರಿಂದ ಜನರೆಲ್ಲರೂ ಗುಳೇ ಕಟ್ಟಿಕೊಂಡು ಕೆಳಗೆ ಸ್ಥಳಾಂತರಗೊಂಡರು, ಆಗ ಈ ಊರಿಗೆ ಗುಳೇದಗುಡ್ಡವೆಂಬ ಹೆಸರು ರೂಢಿಯಾಯಿತು. ಗುಳೇದಗುಡ್ಡವು ಶತಮಾನ ಪೂರ್ವದಲ್ಲಿ ಸಹ ಪ್ರಸಿದ್ದವಾದುದು. ಇಲ್ಲಿ ಮಿಶನರಿ ಕೀಸಾಹೇಬ ಎಂಬುವರು 1854ರಷ್ಟು ಹಿಂದೆಯೂ ಹೆಣ್ಣುಮಕ್ಕಳ ಶಾಲೆಯನ್ನು ಪ್ರಾರಂಭಿಸಿದರು. ಮುಂಬಯಿ ಕರ್ನಾಟಕದಲ್ಲಿಯೂ ಇದು ಪ್ರಥಮವೆಂಬ ದಾಖಲೆ ಇದೆ. ಇಲ್ಲಿ ಜರ್ಮನ್ ಮಿಶನರಿಗಳಿದ್ದವು.

 

 

 

This Page is Maintained by Chief Officer, TMC Guledagudda

 Last date of updation : 31.12.2011

 



No. Of Visitors :
Last Updated   : 03/02/2012  Release History
Release 2.0.0, Powered By Karnataka Municipal Data Society & maintained by Guledagudda TMC
This website can best viewed with the resolution 1024 * 768 using Internet Explorer 7.0 or above.
Valid CSS!